“ಶಿವಶರಣರದೀಕ್ಷಾಸ್ಥಳ ಶ್ರೇಷ್ಠ ಶ್ರೀ' ಪ್ರಶಸ್ತಿ
ಶ್ರೀಮದ್ ರಂಭಾಪುರಿ ಪೀಠದ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರಿಂದ ಪೂಜ್ಯಶ್ರೀಗಳಿಗೆ “ಶಿವಶರಣರದೀಕ್ಷಾಸ್ಥಳ ಶ್ರೇಷ್ಠ ಶ್ರೀ' ಪ್ರಶಸ್ತಿ - 29-03-2013
“ಕರ್ನಾಟಕ ದರ್ಶನ' ಮಾಸ ಪತ್ರಿಕೆ ಹುಬ್ಬಳಿ ಅವರಿಂದ ವಿಶ್ವಜ್ಞಾನಿ' ರಾಷ್ಟ್ರೀಯ ಪ್ರಶಸ್ತಿ
ನಾಡಿನಲ್ಲಿ ಆಧ್ಯಾತ್ಮ, ಶರಣತತ್ವ, ಧಾರ್ಮಿಕ, ಧರ್ಮ ಚಿಂತನೆ, ಸಾಹಿತ್ಯ, ಕಲೆ, ಸಂಗೀತ, ಪರಿಸರ, ಸಮಾಜ ಸೇವೆ ಕನ್ನಡ, ಸಾಂಸ್ಕೃತಿಕ, ಮತ್ತು ಪತ್ರಿಕಾಮಾಧ್ಯಮ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ದಿನಾಂಕ 31-12-2018ನೇ ತಾರೀಖಿನಂದು “ವಿಶ್ವ ಜ್ಞಾನಿ" ರಾಷ್ಟ್ರೀಯ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಗಿದೆ.
ಬೆಂಗಳೂರಿನ ಆಧ್ಯಾತ್ಮ ವಿಶ್ವವಿದ್ಯಾಲಯ ಅವರಿಂದ “ಗೌರವ ಡಾಕ್ಟರೇಟ್”
ಪೂಜ್ಯರ ಹಲವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಲ್ಯಾಣ ಕಾಯಕ ಸಾಧನೆಯನ್ನು ಗುರುತಿಸಿ, 25/02/2021 ಪೂಜ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಮಾಡಿ ಗೌರವಿಸಲಾಗಿದೆ.
ಸಾಹಿತ್ಯ ಚೇತನ ಗೌರವ ಪ್ರಶಸ್ತಿ
ಕಚುಸಾಪ ರಾಜ್ಯಮಟ್ಟದ 12ನೇ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೌರವ ನೀಡಿ. ಅದನ್ನು ಸಮರ್ಥವಾಗಿ ನಿರ್ವಹಿಸಿ ಚುಟುಕು ಸಾಹಿತ್ಯದ ಹಿರಿಮೆ ಹೆಚ್ಚಿದ್ದು ಈ ಸಾಧನೆ ಗುರುತಿಸಿ ಸಾಹಿತ್ಯ ಚೇತನ ಗೌರವ ಪ್ರಶಸ್ತಿ ನೀಡಿ, ಗೌರವಿಸಿದೆ.26/05/2024
"ಜನೋತ್ಸವ ಪ್ರಶಸ್ತಿ"
ವೀರಶೆಟ್ಟಿ ಪಾಟೀಲ ದಂಪತಿಯವರ ಮಗ "ಸಾತ್ವಿಕ'ನ ೫ನೇ ಹುಟ್ಟು ಹಬ್ಬದ ನಿಮಿತ್ಯ ವೀರಶೆಟ್ಟಿ ಎಂ.ಪಾಟೀಲರ ಸಂಪಾದಿತ 'ನಗುಮೊಗದ ಜನೋತ್ಸವ' ಕೃತಿ ಲೋಕಾರ್ಪಣೆಯಲ್ಲಿ ದಿನಾಂಕ 02-01-2023 ರಂದು "ಜನೋತ್ಸವ ಪ್ರಶಸ್ತಿ " ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಾತ್ವಿಕ್ ಪ್ರಶಸ್ತಿ
ಪೂಜ್ಯ ಶ್ರೀ ಷ.ಬ್ರ.ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕನ್ನಡ ನಾಡು-ನುಡಿ, ಸಾಮಾಜಿಕ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತ ಬಸವಕಲ್ಯಾಣ ಗವಿಮಠದ ಪೀಠಾಧಿಪತಿಗಳಾಗಿ ಧರ್ಮದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಬಸವಕಲ್ಯಾಣ ಗವಿಮಠದಲ್ಲಿ ಹಮ್ಮಿಕೊಂಡಿರುವ ವೀರಶೆಟ್ಟಿ ಎಂ.ಪಾಟೀಲರ ಸ್ವರಚಿತ 'ಕಲಿಯುಗ ಮುಗಿಯುವ ಮುನ್ನ' ಮತ್ತು ಸಂಪಾದಿತ 'ಫೋಟೋಗ್ರಾಫಿ' ಕೃತಿ ಲೋಕಾರ್ಪಣೆಯಲ್ಲಿ ದಿನಾಂಕ 02/01/2024 ರಂದು "ಸಾತ್ವಿಕ್" ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕರ್ನಾಟಕ ಸಾಧಕ ರತ್ನ
ಸಮಾಜಸೇವೆ (ವ್ಯಸನಮುಕ್ತ ಸಮಾಜ) ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಗಣನೀಯ ಸೇವೆ ಸಲ್ಲಿಸುತ್ತಿರುವುದಕ್ಕಾಗಿ 01/12/2024 ರಂದು ಬಳ್ಳಾರಿಯಲ್ಲಿ ಜರುಗಿದ ಸಮ್ಮೇಳನ ಕಾರ್ಯಕ್ರಮದಲ್ಲಿ... ಇವರ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸತತ ಸಾಧನೆಯನ್ನು ಸ್ಮರಿಸುತ್ತಾ, "ಕರ್ನಾಟಕ ಸಾಧಕ ರತ್ನ" ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನದೊಂದಿಗೆ ನೀಡಿ ಇವರ ನಿಸ್ವಾರ್ಥ ಸೇವೆ ಸಮಗ್ರ ಸಮಾಜಕ್ಕೇ ಮಾದರಿಯಾಗಿದೆ
ಸಾಹಿತ್ಯ ಚೇತನ ಗೌರವ ಪ್ರಶಸ್ತಿ
ಕಚುಸಾಪ ರಾಜ್ಯಮಟ್ಟದ 12ನೇ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೌರವ ನೀಡಿ. ಅದನ್ನು ಸಮರ್ಥವಾಗಿ ನಿರ್ವಹಿಸಿ ಚುಟುಕು ಸಾಹಿತ್ಯದ ಹಿರಿಮೆ ಹೆಚ್ಚಿದ್ದು ಈ ಸಾಧನೆ ಗುರುತಿಸಿ ಸಾಹಿತ್ಯ ಚೇತನ ಗೌರವ ಪ್ರಶಸ್ತಿ ನೀಡಿ, ಗೌರವಿಸಿದೆ.26/05/2024
ಸಂಪರ್ಕಿಸಲು ವಿವರಗಳು
ಗವಿಮಠದ ವಿಳಾಸ
ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ ಸುಕ್ಷೇತ್ರ ಬಸವಕಲ್ಯಾಣ - 585 327
Email Us
mail@basavakalyangavimath.com
Call Us
+91 9886160800